Festivals from 12th October  to 21st October 2007

 
 

ದಸರಾ

 

ಚರಿತ್ರೆ

 

ಪ್ರವಾಸೋದ್ಯಮ

 

ಘಟನೆಗಳು

 

ದಸರಾ ಸುದ್ದಿ

 

ಗೋಲ್ಡ ಕಾರ್ಡ

 
 
   
ಸ್ಥಳವಕಾಶ
   
ಮನೆ ವಾಸ
   
ಯಾತ್ರೆ ಮತ್ತು ಪ್ರವಾಸ
   
ಮೈಸೂರು ಅರಮನೆ
   
ಚಾಮುಂಡಿ ಬೆಟ್ಟ
   
ಚಾಮರಾಜೇಂದ್ರ ವನ್ಯ ಮೃಗಾಲಯ
   
ಸಂತ ಫಿಲೋಮಿನ ಚರ್ಚ್
   
ಬೃಂದಾವನ ಉದ್ಯಾನ
ಜಗನ್ಮೋಹನ ಅರಮನೆ
   
ಐತಿಹಾಸಿಕ
   
ವ್ಯಾಪಾರ
   
ಆಯುರ್ವೇದ/ಆರೋಗ್ಯ/ಯೋಗ
   
 

  ಮಹಿಶಾಸುರ ಮರ್ಧಿನಿ ಸ್ತೋತ್ರ

 
ಕಂಪ್ಯೂಟರ್ ಭಿತ್ತಿ ಚಿತ್ರ
 

ಮೈಸೂರು ನಗರದ ಸ್ಥಾಪನೆ ಸುಮಾರು ೧೧ನೇ ಶತಮಾನದಲ್ಲಿ ನಡೆಯಿತೆಂದು ನಂಬಲಾಗಿದೆ. ೧೪ ನೆಯ ಶತಮಾನದ ಕೊನೆಯ ಹೊತ್ತಿಗೆ ವೊಡೆಯರ್ ವಂಶದ ಅರಸರು ಮೈಸೂರನ್ನು ಆಳಲಾರಂಭಿಸಿದರು. ಮೈಸೂರು ನಗರದಲ್ ಲಿ ಅನೇಕ ಅರಮನೆಗಳಿರುವುದರಿಂದ ಮೈಸೂರಿಗೆ ಅರಮನೆಗಳ ನಗರ ಎಂದೂ ಹೆಸರು ಸಹ ಬಂದಿದೆ. ಹಿಂದೆ ಮೈಸೂರು ಅಥವ ಮಹಿಶುರು ಎಂದು ಕರೆಯಲ್ಪಡುತ್ತಿತ್ತು. ತಾಯಿ ಚಾಮುಂಡೇಶ್ವರಿಯು ಕೋಣನ ರೂಪದಲ್ಲಿದ್ದ ಮಹಿಶನ& #3240;್ನು ಕೊಂದಾಗ ಬಂದ ಹೆಸರಿದಾಗಿದೆ.

 
 
 
 
 
 
 

ದಸರಾ ಹಬ್ಬವನ್ನು ನವರಾತ್ರಿ, ಮಹಾನವಮಿ ಹಾಗೂ ವಿಜಯದಶಮಿ ಎಂದೂ ಕರೆಯಲಾಗುತ್ತದೆ. ವಿಜಯನಗರದ ಅರಸರ ಕಾಲದಲ್ಲಿ ಆರಂಭವಾದ ಮಹಾನವಮಿ -ವಿಜಯದಶಮಿ ಆಚರಣೆಯಲ್ಲಿ ಪೌರಾಣಿಕ ಹಿನ್ನೆಲೆಯನ್ನು ಕಾ 235;ಬಹುದಾಗಿದೆ. ದುರ್ಗಾದೇವಿ ಅಥವಾ ಚಾಮುಂಡೇಶ್ವರಿಯು ದೇವತೆಗಳಿಗೆ ಮಾರಕನಾಗಿದ್ದ ಮಹಿಷಾಸುರನನ್ನು ಸಂಹರಿಸಿ ಗಳಿಸಿದ ವಿಜಯದ ಸಂಕೇತವೇ ಈ ವಿಜಯದಶಮಿ.
ಮೈಸೂರಿನ ಒಡೆಯರ ಮನೆತನದ ಆಳ್ವಿಕೆಯು ಕ್ರಿ.ಶ.1399ರಲ್ಲಿ ಆರಂಭವಾಯಿತು. ಮೈಸೂರನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡು, ವಿಜಯನಗರದ ಸಾಮಂತರಾಗಿ ಯದುರಾಯ ಕೃಷ್ಣರಾಯ ಸಹೋದರರು ಅರಂಭದ ದೊರೆಗಳಾ ;ಗಿ ಆಳ್ವಿಕೆ ಆರಂಭಿಸಿದರು. ಇವರು ಕ್ರಿ.ಶ.1610 ರಲ್ಲಿ ವಿಜಯನಗರದ ಅರಸು ಇಮ್ಮಡಿ ವೆಂಕಟನ ಪ್ರತಿನಿಧಿ ಶ್ರೀರಂಗರಾಯನಿಂದ ಶ್ರೀರಂಗಪಟ್ಟಣವನ್ನು ವಶಪಡಿಸಿಕೊಂಡು ತಮ್ಮ ರಾಜಧಾನಿಯನ್ನು ಮೈಸೂರಿನಿಂದ ಶ್ń 8;ೀರಂಗಪಟ್ಟಣಕ್ಕೆ ವರ್ಗಾಯಿಸಿದರು.ಅಂದಿನಿಂದ ಈ ಹೊಸ ರಾಜಧಾನಿಯು ಸಂಸ್ಥಾನದ ಆಡಳಿತ ಹಾಗೂ ಸಾಂಸ್ಕೃತಿಕ ಕೇಂದ್ರವಾಗಿ ಅಭಿವೃದ್ಧಿಗೊಂಡಿತು. ಕ್ರಿ.ಶ.1610 ರಲ್ಲಿ ನವರಾತ್ರಿ ಉತ್ಸವ ಮೈಸೂರು ಸಂಸ್ಥಾನದಲ 277;ಲಿ ಪ್ರಾರಂಭವಾಯಿತು. ಇವರ ಉತ್ತರಾಧಿಕಾರಿಗಳು ಇದೇ ಸಂಪ್ರದಾಯವನ್ನು ಮುಂದುವರಿಸಿದರು.
ನವರಾತ್ರಿ ನಾಡಹಬ್ಬವು ಆಶ್ವಯುಜ ಶುದ್ಧ ಪ್ರಥಮದಂದು (ಸಾಮಾನ್ಯವಾಗಿ ಸೆಪ್ಟೆಂಬರ್‌-ಅಕ್ಟೋಬರ್ ಮಾಹೆಯಲ್ಲಿ) ಆರಂಭವಾಗಿ ವಿಜಯದಶಮಿಯಂದು ಜಂಬೂಸವಾರಿಯಾಂದಿಗೆ ಈ ಆಚರಣೆಗೆ ಸಂಬಧಿಸಿದ ಎಲ್ಲ ಸ ಂಪ್ರದಾಯಗಳು ವಿಧಿವಿಧಾನಗಳೂ ಪೂರ್ಣಗೊಳ್ಳುತ್ತವೆ.

ನವರಾತ್ರಿಯ ಪ್ರಥಮ ದಿನ ಪ್ರಾತಃಕಾಲದಲ್ಲಿ ಒಡೆಯರು ಉತ್ಸವಾರ್ಥವಾಗಿ ದೇವಾಲಯಗಳಿಂದ ಕಳುಹಿಸಲ್ಪಟ್ಟ ಎಣ್ಣೆಯನ್ನು ಹಾಕಿಕೊಂಡು ಅಭ್ಯಂಜನ ಮಾಡಿ ನಂತರ ನೂತನ ಯಜ್ಞೋಪವೀತವನ್ನು ಧರಿಸಿ,ದೀ ಕ್ಷಾ ವಸ್ತ್ರವನ್ನುಟ್ಟು ಅರಮನೆಯಲ್ಲಿ ಚಾಮುಂಡೇಶ್ವರಿ ದೇವಿಯ ವಿಗ್ರಹದ ಮುಂದೆ ಪವಿತ್ರ ಕಂಕಣ ಧರಿಸುತ್ತಿದ್ದರು. ಕಂಕಣ ಧರಿಸಿದ ಮೇಲೆ ಒಡೆಯರು ಅರಮನೆಯನ್ನು ಬಿಟ್ಟು ಹೊರಗೆ ಹೋಗುವಂತಿರಲಿಲ್ಲ. ಕ 202;ಕಣ ಧರಿಸುವುದರೊಂದಿಗೆ ನವರಾತ್ರಿಯ ಸಂಪ್ರದಾಯಬದ್ಧ ಕಾರ್ಯಕ್ರಮಗಳು ವಿಧ್ಯುಕ್ತವಾಗಿ ಆರಂಭವಾಗುತ್ತಿದ್ದವು.ನಂತರ ಮುತ್ತು,ರತ್ನ,ಹವಳ,ಗೋಮೇಧಿ,ಚಿನ್ನದ ದಾರದ ಎಳೆಗಳಿಂದ ಚಿತ್ತಾರಗಳನ್ನು ಮಾಡಿ 238; ರೇಶಿಮೆ ವಸ್ತ್ರ ಧರಿಸಿ,ವಜ್ರ ವೈಢೂರ್ಯಗಳಿಂದ ತಯಾರಿಸಿದ ಆಭರಣಗಳನ್ನು ತೊಟ್ಟು ಸಿಂಹಾಸನದ ಬಳಿಗೆ ಬರುತ್ತಿದ್ದರು.ಆ ವೇಳೆಗೆ ಅರಮನೆಯ ಸಂಬಂಧಿಕರು,ರಾಜಪುರೋಹಿತರು,
ಆಸ್ಥಾನ ವಿದ್ವಾಂಸರುಗಳು,ಆಹ್ವಾನಿತರು ದೊರೆಗಳ ಆಗಮನವನ್ನು ಕಾದು ನಿಂತಿರುತ್ತಿದ್ದರು.ಒಡೆಯರು ರಾಜಪುರೋಹಿತರ ಸಲಹೆಯಂತೆ ಸುಮುಹೂರ್ತದಲ್ಲಿ ಸಿಂಹಾಸನಕ್ಕೆ ಪೂಜಿಸಿ,ಪಟ್ಟದ ಕತ್ತಿಯನ್ನ 65; ಹಿಡಿದು ಏಳು ಮೆಟ್ಟಿಲುಗಳ ಸಿಂಹಾಸನವನ್ನು ಆರೋಹಣ ಮಾಡುತ್ತಿದ್ದರು. ಇದೇ ವೇಳೆಗೆ ದೇವಾಲಯಗಳಿಂದ ಫಲಪುಷ್ಪ ಮಂತ್ರಾಕ್ಷತೆಯನ್ನು ಪ್ರಸಾದವಾಗಿ ತಂದು ಒಡೆಯರಿಗೆ ನೀಡಲಾಗುತ್ತಿತ್ತು.ಒಡೆಯರು ಸಿಂ&# 3257;ಾಸನದಲ್ಲಿ ಕುಳಿತ ನಂತರ ಅಲ್ಲಿ ನೆರೆದಿದ್ದವರೆಲ್ಲರೂ ತಮ್ಮತಮ್ಮ ನಿಗದಿತ ಆಸನಗಳಲ್ಲಿ ಆಸೀನರಾಗುತ್ತಿದ್ದರು. ಆ ಸಂದರ್ಭದಲ್ಲಿ ಅರಮನೆಯ ಆನೆ, ಕುದುರೆ, ಒಂಟೆ, ಕಾಲಾಳುಗಳನ್ನು ಸಾಲಾಗಿ ನಿಲ್ಲಿಸಿರ 65;ತ್ತಿದ್ದರು. ಆಸ್ಥಾನದ ಹೊಗಳುಭಟರು ಒಡೆಯರು ತಮ್ಮ ಭುಜಬಲದಿಂದ ಗೆದ್ದುಕೊಂಡಿದ್ದ ಬಿರುದುಗಳನ್ನು ಉಚ್ಚರಿಸುತ್ತಿದ್ದರು. ವೇಣು, ವೀಣಾ, ಮೃದಂಗ, ಕಹಳೆ ಭೇರಿ ವಾದ್ಯ ಧ್ವನಿಗಳಿಂದ ಅರಮನೆ ತುಂಬಿರುತ್Ń 6;ಿತ್ತು. ಈ ಸಮಯದಲ್ಲೇ ಒಡೆಯರಿಗೆ ನಜರ್‌ ಒಪ್ಪಿಸಲು ಅವಕಾಶ ಮಾಡಿಕೊಡಲಾಗುತ್ತಿತ್ತು. ಸಾಮಂತರು, ಬಂಧುಬಾಂಧವರು ತಮ್ಮ ಅಂತಸ್ತು ಹಾಗೂ ಶಕ್ತಿಯಾನುಸಾರ ಕಾಣಿಕೆಗಳನ್ನು ಒಪ್ಪಿಸುತ್ತಿದ್ದರು. ಇದಕ್ಕೆ & #3242;್ರತಿಯಾಗಿ ಒಡೆಯರು ಅತಿಥಿಗಳಿಗೆ ಫಲತಾಂಬೂಲ ನೀಡುವುದು ಸಂಪ್ರದಾಯವಾಗಿ ಇಂದಿಗೂ ಉಳಿದುಕೊಂಡು ಬಂದಿದೆ. ಅದೇ ರೀತಿ ಸಾಯಂಕಾಲವೂ ಕೂಡ ಒಡೆಯರು ಸಿಂಹಾಸನಾರೋಹಣ ಮಾಡಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ ;ನು ವೀಕ್ಷಿಸುತ್ತಿದ್ದರು. ಈ ನಡಾವಳಿಯು ಒಂಬತ್ತು ದಿನಗಳೂ ನಿರಂತರವಾಗಿ ಜರುಗುತ್ತಿತ್ತು.

ನವರಾತ್ರಿಯ ಒಂಬತ್ತು ದಿನಗಳಲ್ಲಿ ಏಳನೇ ದಿನವಾದ ಮೂಲಾನಕ್ಷತ್ರದಂದು ವಿದ್ಯಾಧಿದೇವತೆಯಾದ ಸರಸ್ವತಿಯನ್ನು ಪೂಜಿಸುವುದು ಅನೂಚಾನವಾಗಿ ನಡೆದುಕೊಂಡು ಬಂದಿದೆ. ಅಂದು ಓಲೆಗರಿಗಳು,ಸಂಗೀತ ಸಾಧನಗಳು, ಕಲಿಕೆಯ ಎಲ್ಲಾ ವಸ್ತುಗಳನ್ನೂ ಪೂಜಿಸಲಾಗುತ್ತದೆ. ಅದೇರೀತಿ ಒಂಬತ್ತನೇ ದಿನ ಅಂದರೆ ಮಹಾನವಮಿಯಂದು ಅರಮನೆಯ ಆಯುಧಾಗಾರದಲ್ಲಿರುತ್ತಿದ್ದ ಎಲ್ಲ ಆಯುಧಗಳನ್ನು,ಪಟ್ಟದ ಕತ್ತಿ,ಆನೆ ಕುದುರೆ  218;ಂಟೆ ಇತ್ಯಾದಿಗಳನ್ನು ಪೂಜಿಸಲಾಗುತ್ತಿತ್ತು. ಪಟ್ಟದ ಕತ್ತಿ ಹಾಗು ಆನೆ ಕುದುರೆ ಒಂಟೆ ಇವುಗಳನ್ನು ಸುಮುಹೂರ್ತದಲ್ಲಿ ನದಿಗೆ ಕೊಂಡೊಯ್ದು ಅರಿಶಿಣ ಮತ್ತು ಎಣ್ಣೆ ಹಾಕಿ ಸ್ನಾನ ಮಾಡಿಸಿ ಮೆರವಣಿಗೆಯಲ ;್ಲಿ ಅರಮನೆಗೆ ತರಲಾಗುತ್ತಿತ್ತು. ಅರಮನೆಯ ಸೌಂದರ್ಯವಿಲಾಸ ತೊಟ್ಟಿಯು ಪಟ್ಟದ ಕತ್ತಿಯನ್ನು ಇಡುವ ಸಲುವಾಗಿ ಕಟ್ಟಿಸಿದ್ದ ವಿಶೇಷ ಕೊಠಡಿಯಾಗಿತ್ತು.

ಒಡೆಯರು ಪಟ್ಟದ ಕತ್ತಿ ಹಾಗೂ ಇತರ ಆಯುಧಗಳು ಮುಂತಾದವುಗಳನ್ನು ಸ್ವತಃ ಪೂಜಿಸುತ್ತಿದ್ದರು. ಇದೇ ವೇಳೆಯಲ್ಲಿ ಚಂಡೀಹೋಮವನ್ನು ಮಾಡಲಾಗುತ್ತಿತ್ತು. ಅಂದು ಸಂಜೆ ಮಹಾನವಮಿಯ ಎಲ್ಲಾ ಕಾರ್ಯಕ್ 48;ಮಗಳು ಪೂರ್ಣಗೊಂಡ ನಂತರ ಚಾಮುಂಡೇಶ್ವರಿ ದೇವಿಯ ಎದುರಿನಲ್ಲಿ ಕಂಕಣವನ್ನು ಪುರೋಹಿತರು ಮಂತ್ರೋಚ್ಛಾರಣೆ ಮಾಡಿದ ನಂತರ ಬಿಚ್ಚಲಾಗುತ್ತಿತ್ತು.ಇದರೊಂದಿಗೆ ನವರಾತ್ರಿ ಕಾರ್ಯಕ್ರಮಗಳು ಮುಕ್ತಾಯಗŇ 4;ಳ್ಳುತ್ತಿದ್ದವು. ಇಂದಿಗೂ ಖಾಸಗಿಯಾಗಿ ಒಡೆಯರ ಮನೆತನದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ರವರು ತಮ್ಮ ಬಂಧುಗಳ ಸಮ್ಮುಖದಲ್ಲಿ ಈ ಸಂಪ್ರದಾಯಗಳನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ŀ 6;ದರೆ ವಿಜಯ ದಶಮಿಯಂದು ನಡೆಯುವ ಜಂಬೂಸವಾರಿಯಲ್ಲಿ ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುತ್ತಿದೆ.

ಅಂದಿನಿಂದ ಇಂದಿನವರೆಗೂ ಮೈಸೂರಿನ ದಸರಾ ವಿಶೇಷಗಳಲ್ಲಿ ಜಟ್ಟಿ ಕಾಳಗ ವಿಶ್ವವಿಖ್ಯಾತಿ ಪಡೆದಿದೆ. ವಿಜಯದಶಮಿಯ ದಿನ ಆಯುಧಗಳನ್ನು ಮತ್ತು ಪಟ್ಟದ ಕತ್ತಿಯನ್ನು ಆಯುಧಾಗಾರಕ್ಕೆ ಕಳುಹಿಸುವ ń 6;ುನ್ನ ಜಟ್ಟಿ ಕಾಳಗವನ್ನು ನಡೆಸಲಾಗುತ್ತಿತ್ತು. ಇದರಲ್ಲಿ ಸ್ಪರ್ಧಿಸಲು ಮೈಸೂರು ಸಂಸ್ಥಾನದ ನಾನಾ ಭಾಗಗಳಿಂದ ಹಾಗೂ ಬೇರೆ ಬೇರೆ ರಾಜ್ಯಗಳಿಂದ ಜಟ್ಟಿಗಳನ್ನು ಆಹ್ವಾನಿಸಲಾಗುತ್ತಿತ್ತು.ಜಟ್ಟಿ ಕಾಳ 223;ವನ್ನು ಒಡೆಯರ ಎದುರಿನಲ್ಲಿಯೇ ನಡೆಸಲಾಗುತ್ತಿತ್ತು.
ಇನ್ನು ವಿಜಯದಶಮಿಯ ಮುಂದಿನ ಕಾರ್ಯಕ್ರಮವೆಂದರೆ ಜಂಬೂಸವಾರಿ. ಮೈಸೂರಿನಲ್ಲಿ ನಡೆಯುವ ದಸರಾ ಮೆರವಣಿಗೆಯು ದೇಶ ವಿದೇಶಗಳಲ್ಲಿ ಖ್ಯಾತಿ ಪಡೆದಿದೆ. ವಿಜಯದಶಮಿಯ ದಿನ ಮಧ್ಯಾಹ್ನ ಪಟ್ಟದ ಆನೆಯನ್ń 0;ು ಅಲಂಕರಿಸಿ ಅದರ ಬೆನ್ನಮೇಲೆ ನವರತ್ನಗಳಿಂದ ಸಿಂಗರಿಸಿದ ಚಿನ್ನದ ಅಂಬಾರಿಯನ್ನು ಇರಿಸಲಾಗುತ್ತಿತ್ತು. ಒಡೆಯರು ವಿಶೇಷ ವಸ್ತ್ರಾಭರಣಗಳನ್ನು ತೊಟ್ಟು ಸುಮುಹೂರ್ತದಲ್ಲಿ ಅಂಬಾರಿಯನ್ನೇರುತ್ತಿದ ;್ದರರು. ಇವರ ಇಕ್ಕೆಡಗಳಲ್ಲಿ ರಾಜಕುಮಾರರುಗಳು,ನಂತರ ದಳಪತಿಗಳು, ಹಿಂದೆ ಸೈನಿಕರು, ಆಸ್ಥಾನಿಕರು, ಮುಂಭಾಗದಲ್ಲಿ ನಂದಿಧ್ವಜ ಹಿಡಿದು ನರ್ತಿಸುವವರು,ವೀರಗಸೆಯವರು, ಕರಿತುರಗಗಳು ಸಾಲಾಗಿ ಮೆರವಣಿಗೆಯ ಲ್ಲಿ ಸಾಗುತ್ತಿದ್ದರು.

ಮೆರವಣಿಗೆಯು ಬನ್ನಿ ಅಥವಾ ಶಮೀ ವೃಕ್ಷದವರೆಗೆ ಸಾಗುತ್ತಿತ್ತು. ಪಂಜು ಪ್ರದರ್ಶನ ಮಾಡಿದ ನಂತರ ಮೆರವಣಿಗೆಯಲ್ಲೇ ಅರಮನೆಗೆ ಹಿಂದಿರುಗಲಾಗುತ್ತಿತ್ತು. ನಂತರ ಒಡೆಯರು ಪಟ್ಟದ ಕತ್ತಿಯನ್ನು  226;ಾಮುಂಡಿ ದೇವಿಯ ಮುಂದೆ ಇಡುತ್ತಿದ್ದರು. ಇದರೊಂದಿಗೆ ದಸರಾದ ಕಾರ್ಯಕ್ರಮಗಳು ಕ್ರಮಬದ್ಧವಾಗಿ ಅಂತ್ಯಗೊಂಡಂತಾಗುತ್ತಿತ್ತು.

ದಸರಾ ವಸ್ತು ಪ್ರದರ್ಶನವನ್ನು ದೂಡ್ಡ ಕೆರೆ ಮೈದಾನದಲ್ಲಿ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದವರು ಆಯೋಜಿಸಿದ್ದಾರೆ. ಇಲ್ಲಿ ಸರ್ಕಾರಿ ಹಾಗೂ ಖಾಸಗಿ ಸ್ವಾಮ್ಯಕ್ಕೆ ಒಳಪಟ್ಟ ಉದ್ಯ&# 3246;ಗಳು ಮತ್ತು ಸರ್ಕಾರಿ ಇಲಾಖೆಗಳು ತಮ್ಮ ಮಳಿಗೆಗಳನ್ನು ಸ್ಥಾಪಿಸಿ ಉತ್ತಪ್ಪನ್ನಗಳನ್ನು ಹಾಗೂ ಯೋಜನೆಗಳನ್ನು ಪ್ರದರ್ಶಿಸಲಾಗುತ್ತದೆ.


 

 


 

 
 
 
 
 

Kannada | English
Automated Translation from Google >
  French | German | Italian | Portuguese | Spanish
Beta Version - Chinese | Japanese | Korean | Russian

 


ಜಂಬೂ ಸವಾರಿ

  

ಸಾಮಾನ್ಯ ಮಾಹಿತಿ
ಚಲನ ಚಿತ್ರೋತ್ಸವ
ದಸರಾಕಾರ್ಯಕ್ರಮಗಳು
ಯುವ ದಸರ

ಮೈಸೂರಿಗೆ ಮಹಾಭಾರತ ಮತ್ತು ಮೂರನೆಯ ಶತಮಾನದ ಸಾಮ್ರಟ ಅಶೋಕನೋಂದಿಗೂ ಸಂಭಂಧವಿತ್ತು. ಒಡೆಯರ ಆಳವಿಕೆಯಲ್ಲಿ, ಮೈಸೂರನ್ನು ತನ್ನ ವೈಭವದ ಶಿಖರವನ್ನು ಮುಟ್ಟಿತ್ತು. ಹೈದರಾಲಿ ಮತ್ತು ಅವನ ಮಗನಾದ ಟಿ ;ಪ್ಪು ಸುಲ್ತಾನ್ ಈ ನಾಡಿನ ಇತಿಹಾಸ ಪ್ರಖ್ಯಾತ ವ್ಯಕ್ತಿಗಳಾಗಿದ್ದರು. ಅವರು ಮೈಸೂರು ರಾಜ್ಯವನ್ನು ವಿಸ್ತರಿಸಿದರು ಹಾಗು ಬ್ರಿಟೀಷರನ್ನು ತಡೆಯುವುದರ ಮೂಲಕ ಜಗತ್ತಿನಲ್ಲೆ ಹೆಸರುವಾಸಿಯಾದರು.

 

ಮೈಸೂರು ಅರಮನೆ ಮತ್ತು ವಸ್ತು ಸಂಗ್ರಹಾಲಯ: ಸಮಯ 10.30 am ರಿಂದ 5.30 pm
ಚಾಮುಂಡಿ ಬೆಟ್ಟ
7.30 am ರಿಂದ 2 pm, 3.30 pm ರಿಂದ 6 pm ಮತ್ತು 7.30 pm ರಿಂದ 9 pm.
ಜಗನ್ಮೋಹನ ಅರಮನೆ: ಸಮಯ 9.30 am ರಿಂದ6.30 pm
ಚಾಮರಾಜೇಂದ್ರ ವನ್ಯ ಮೃಗಾಲಯ ಮತ್ತು ಕಾರಂಜಿ ಕೆರೆ ಸಮಯ 8.30 am ರಿಂದ 5.30 pm
ಸಂತ ಫಿಲೋಮಿನ ಚರ್ಚ್ ಸಮಯ 5.30am ರಿಂದ 8 pm
ಬೃಂದಾವನ ಉದ್ಯಾನ8.30 am ರಿಂದ 9 pm

 
 
 
    Powered by